ಹೊಸಪೇಟೆ ನಗರ ಪ್ರದೇಶ, ಹಂಪಿ, ಕಮಲಾಪುರ ಸೇರಿ ನಗರ, ಪಟ್ಟಣ, ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್, ಕಟೌಟ್, ಬಂಟಿAಗ್ಸ್ಗಳನ್ನು ಕಟ್ಟದಂತೆ ನೋಡಿಕೊಳ್ಳಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಜ.30 ರಂದು ಇಲ್ಲಿನ ಉಪವಿಭಾಗಧಿಕಾರಿ ಹೊರಡಿಸಿದ ಆದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬ್ಯಾನರ್, ಹೋರ್ಡಿಂಗ್, ಫ್ಲೇಕ್ಸ್, ಪೋಸ್ಟರ್‌ಗಳು ಹಾಗೂ ಇತರೆ ಜಾಹೀರಾತು ಸಾಮಗ್ರಿಗಳನ್ನು ಸ್ಥಾಪಿಸುವುದು ದಂಡನೀಯ ಅಪರಾಧವಾಗಿರುತ್ತದೆ. ಕರ್ನಾಟಕ ಪುರಸಭೆ ಕಾಯಿದೆ 1964 ಹಾಗೂ ಅನ್ವಯವಾಗುವ ಇತರೆ ಕಾಯಿದೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅನಧಿಕೃತ ಬ್ಯಾನರ್ ಬಗ್ಗೆ ನಿಗಾ ವಹಿಸುವಂತೆಯೂ ಆದೇಶಲ್ಲಿ ಸೂಚಿಸಲಾಗಿದೆ.